August 5, 2025
Screenshot 2025-03-13 190827

ಉಚ್ಚಿಲ ಸರಸ್ವತಿ ಮಂದಿರ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಪೀಸ್ ಫೌಂಡೇಶನ್ ಮತ್ತು ಕೃಷ್ಣ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.

ಪೀಸ್ ಫೌಂಡೇಶನ್ ಸ್ಥಾಪಕಿ ಡಾ. ಸೋನಿಯಾ, ಕೃಷ್ಣ ಫ್ಯಾಮಿಲಿ ಟ್ರಸ್ಟ್‌ನ ಡಾ. ಕೆ. ಜಯರಾಮ ಭಟ್, ಸಾರಾ ಚಾರಿಟೇಬಲ್ ಟ್ರಸ್ಟ್‌ನ ಪ್ರೀದಾ ಸುರೇಶ್, ಪ್ರಾಥಮಿಕ ಶಾಲಾ ಸಂಚಾಲಕ ಮೋಹನದಾಸ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಲಾವತಿ, ಪೀಸ್ ಫೌಂಡೇಶನ್ ಕಾರ್ಯದರ್ಶಿ ಜಗದೀಶ್ ಭಟ್ ಮತ್ತು ಸದಸ್ಯ ದಯಾನಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ಸ್ವಾಗತಿಸಿ, ಡಾ. ಕೆ. ಜಯರಾಮ ಭಟ್ ಆರೋಗ್ಯ ಕುರಿತ ಮಾಹಿತಿ ನೀಡಿದರು. ಶಾಲಾ ವತಿಯಿಂದ ಡಾ. ಸೋನಿಯಾ ಅವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವೈ. ನಿರೂಪಿಸಿ, ವಂದಿಸಿದರು.

error: Content is protected !!