
ಉಡುಪಿ: ಸ್ನೇಹಿತರೇ, ಪುತ್ತೂರಿನ ಸುಬ್ರಹ್ಮಣ್ಯ ನಗರದ ಲಿಂಗೋಟ್ಟುಗುಡ್ಡೆಯಲ್ಲಿ ಒಂದು ಭೀಕರ ಘಟನೆ ನಡೆದಿದೆ. ನಡುರಾತ್ರಿ ಮನೆಗೆ ನುಗ್ಗಿ ಒಬ್ಬ ಗೆಳೆಯನನ್ನು, ಅವನ ಪತ್ನಿ, ತಾಯಿ ಮತ್ತು ಮಗುವಿನ ಮುಂದೆಯೇ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಲಾಗಿದೆ.
ಹತ್ಯೆಗೀಡಾದ ವ್ಯಕ್ತಿ 40 ವರ್ಷದ ವಿನಯ್ ದೇವಾಡಿಗ ಎಂದು ಗುರುತಿಸಲಾಗಿದೆ. ಅವರು ಪೈಂಟಿಂಗ್ ವೃತ್ತಿಯಲ್ಲಿದ್ದರು.
ಘಟನೆಯ ವಿವರ ಹೀಗಿದೆ: ವಿನಯ್ ದೇವಾಡಿಗ ಸಾಮಾನ್ಯ ದಿನದಂತೆ ಊಟ ಮಾಡಿ ಮಲಗಿದ್ದ ಸಮಯದಲ್ಲಿ, ಮಂಗಳವಾರ ರಾತ್ರಿ ಸುಮಾರು 11:45ಕ್ಕೆ ಮನೆಯ ಬಾಗಿಲು ಜೋರಾಗಿ ಬಡಿದ ಸದ್ದು ಕೇಳಿಸಿತು. ಭಯಭ್ರಾಂತಳಾದ ಪತ್ನಿ ಬಾಗಿಲು ತೆರೆದಾಗ, “ವಿನಯ್ ಇದ್ದಾನೆ?” ಎಂದು ಕೇಳಲಾಯಿತು. ತಕ್ಷಣವೇ ಮೂವರು ಬಂದು ಬೆಡ್ರೂಮ್‌ಗೆ ನುಗ್ಗಿ, ವಿನಯ್‌ನ ಮೇಲೆ ದಾಳಿ ಮಾಡಿದರು.

ಈ ದಾಳಿಯನ್ನು ತಡೆಯಲು ಮುಂದಾದ ಪತ್ನಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
