August 5, 2025
Screenshot_20250714_1005142-640x365

ಉಡುಪಿ: ನಗರದ ಸರಕಾರಿ ಬಾಲ ಮಂದಿರದಲ್ಲಿ ದಾಖಲಾಗಿದ್ದ ಇಬ್ಬರು ಬಾಲಕರು ಓಡಿ ಹೋಗಿರುವ ಘಟನೆ ನಡೆದಿದೆ.

ನಾಪತ್ತೆಯಾದ ಬಾಲಕರು ಬೆಂಗಳೂರಿನ ನಿವಾಸಿಗಳಾದ ದಿಲೀಪ್ (14) ಹಾಗೂ ಧನರಾಜ್ (13) ಎಂದು ಗುರುತಿಸಲಾಗಿದೆ.

ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿ, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ:
ದಿಲೀಪ್ (14) – ಜ್ಞಾನಮಂದಿರ ಸರಕಾರಿ ಶಾಲೆ, ಕನಕನಗರ ಇಳೆಜ್ ನಗರ ಹತ್ತಿರ ಅಂಗನವಾಡಿ ಸಮೀಪ, ವಿಷ್ಣುವರ್ಧನ ಸರ್ಕಲ್, 13ನೇ ಕ್ರಾಸ್ ಬೆಂಗಳೂರು ನಿವಾಸಿ
ಧನರಾಜ್ (13) – ರಾಜರಾಜೇಶ್ವರಿ ನಗರ ಗಾರ್ಡನ್, ಅಂಜನೇಯ ದೇವಾಲಯದ ಬಳಿಯ ರಾಜರಾಜೇಶ್ವರಿ ನಗರ ಪಾರ್ಕ್, ಕುಮಾರಸ್ವಾಮಿ ಲೇಔಟ್ ಬೆಂಗಳೂರು ನಿವಾಸಿ

ಈ ಇಬ್ಬರು ಬಾಲಕರು 07/07/2025ರಂದು ಉಡುಪಿ ಜಿಲ್ಲೆಯ ಸರಕಾರಿ ಬಾಲಕರ ಬಾಲ ಮಂದಿರ ಸಂಸ್ಥೆಗೆ ಸ್ವಾಗತ ಕೇಂದ್ರದ ಮೂಲಕ ದಾಖಲಾಗಿ, 13/07/2025ರಂದು ಮಧ್ಯಾಹ್ನ 1:40ಕ್ಕೆ ಸಂಸ್ಥೆಯ ಕಾರಿಡಾರ್ ಬಾಗಿಲು ಮೂಲಕ ಓಡಿ ಹೋಗಿದ್ದಾರೆ ಎಂದು ಹಮ್ಮಿಯ ಗೃಹಪಾಲಕ ಪ್ರಮೋದ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧವಾಗಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ಸಂಖ್ಯೆ 28/2025, ಕಲಂ 137(2) BNS ಅಡಿಯಲ್ಲಿ ದಾಖಲಿಸಲಾಗಿದೆ.

error: Content is protected !!