August 3, 2025
suicide-concept-noose-shadow-on-600nw-1794241192

ಉಡುಪಿ: ಕಿವಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಆತ್ಮಹತ್ಯೆಗೈದ ಘಟನೆ…

ಉಡುಪಿ ನಗರದ ಸಮೀಪದ ಮೂಡನಿಡಂಬೂರು ಗ್ರಾಮದಲ್ಲಿ, ಶೋಭಲತಾ (48) ಎಂಬ ಮಹಿಳೆ ಚೂಡಿದಾರ್ ದುಪ್ಪಟ್ಟದ ಸಹಾಯದಿಂದ ಮನೆ ಒಳಗಡೆ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಮಹಿಳೆ ಮೂಡನಿಡಂಬೂರು ಗ್ರಾಮದ ವಿಶ್ವಾಸ್ ಟವರ್ಸ್‌ನ ಫ್ಲಾಟ್ ನಂ. 803ರಲ್ಲಿ ವಾಸವಾಗಿದ್ದರು. ಶೋಭಲತಾ ಅವರು ಕೆಲ ತಿಂಗಳ ಹಿಂದೆ ಬಲಕಿವಿಯಲ್ಲಿ ತೀವ್ರ ತಮಟೆ ಸಮಸ್ಯೆಯಿಂದ ಬಳಲುತ್ತಿದ್ದು, ಮೇ 21 ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ನಂತರವೂ ಕಿವಿಯಲ್ಲಿ ಆಗಾಗ್ಗೆ ತೊಂದರೆ ಅನುಭವಿಸುತ್ತಿದ್ದರು. ಈ ಕಾರಣದಿಂದಾಗಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಪತಿ ಜಗದೀಶ್ ಕುಮಾರ್ (61) ತಿಳಿಸಿದ್ದಾರೆ.

ಜುಲೈ 16 ರಂದು ಸಂಜೆ 6 ಗಂಟೆಗೆ ಶೋಭಲತಾ ಮಲಗಿದ್ದರು. ಅವರು ಮನೆಗೆ ಬಾರದ ಕಾರಣ ಪತಿ ಜಗದೀಶ್ ಕುಮಾರ್ ಜುಲೈ 17ರ ಬೆಳಿಗ್ಗೆ ಹುಡುಕಾಟ ನಡೆಸಿ, ಅಡುಗೆ ಕೋಣೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ ಹಚ್ಚಿದರು. ತಕ್ಷಣ ಅವರನ್ನು ಅಜ್ಜರಕಾಡು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಬೆಳಿಗ್ಗೆ 8 ಗಂಟೆಗೆ ಮೃತರಾಗಿರುವುದನ್ನು ದೃಢಪಡಿಸಿದರು.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 66/2025, BNSS ಸೆಕ್ಷನ್ 194ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!