
ಉಡುಪಿ: ಇತ್ತೀಚೆಗೆ ಕೇಬಲ್ ಆಪರೇಟರ್ಗಳು ಪ್ರತಿ ಎರಡು ವರ್ಷಕ್ಕೊಮ್ಮೆ ಸೆಟ್ಟಾಪ್ ಬಾಕ್ಸ್ಗಳನ್ನು ಬದಲಾಯಿಸುತ್ತಿದ್ದು, ಇದು ಗ್ರಾಹಕರಿಗೆ ಹೆಚ್ಚಿನ ತೊಂದರೆ ಉಂಟುಮಾಡಿದೆ. ಕೆಲವು ಕೇಬಲ್ ಆಪರೇಟರ್ಗಳ ಮುಖ್ಯಸ್ಥರು ತಮ್ಮ ಸ್ವಂತ ಲಾಭಕ್ಕಾಗಿ ಇತರ ಆಪರೇಟರ್ಗಳ ಮೂಲಕ ಹೊಸ ಸೆಟ್ಟಾಪ್ ಬಾಕ್ಸ್ಗಳನ್ನು ಒತ್ತಾಯಪೂರ್ವಕವಾಗಿ ಅಳವಡಿಸುವಂತೆ ಮಾಡುತ್ತಿದ್ದಾರೆ.
ಹಲವು ಹೊಸ ಕಂಪನಿಗಳು ಕೇಬಲ್ ಉದ್ಯಮದಲ್ಲಿ ಪ್ರವೇಶಿಸಿದ್ದು, ಅವು ಗ್ರಾಹಕರಿಗೆ ಹೊಸ ಪ್ಲಾನ್ಗಳನ್ನು ನೀಡುತ್ತಿವೆ. ಆದರೆ, ಆಪರೇಟರ್ಗಳು ಈ ಸೌಲಭ್ಯಗಳನ್ನು ಗ್ರಾಹಕರಿಗೆ ತಲುಪಿಸದೆ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಉಡುಪಿಯಲ್ಲಿ ಕಾರ್ಯಾರಂಭ ಮಾಡಿದ ಗುಜರಾತ್ ಮೂಲದ ಒಂದು ಸಂಸ್ಥೆ ಗ್ರಾಹಕರಿಗೆ ಉಚಿತ ಸೆಟ್ಟಾಪ್ ಬಾಕ್ಸ್ ಮತ್ತು ಮೂರು ತಿಂಗಳ ಉಚಿತ ಮಾಸಿಕ ಚಂದಾದಾರಿ ಸೌಲಭ್ಯ ನೀಡುತ್ತಿದೆ ಎನ್ನುವ ಮಾಹಿತಿ ಬಂದಿದೆ. ಆದರೆ, ಆಪರೇಟರ್ಗಳು ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡದೆ ವಂಚಿಸುತ್ತಿದ್ದಾರೆ.
ಸೆಟ್ಟಾಪ್ ಬಾಕ್ಸ್ಗಳನ್ನು ಪದೇ ಪದೇ ಬದಲಾಯಿಸುವ ಪ್ರಕ್ರಿಯೆಯಿಂದ ಹಿರಿಯರು ಮತ್ತು ಗ್ರಾಮಾಂತರದ ಜನರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಚಾನೆಲ್ಗಳ ಸಂಖ್ಯೆ ಬದಲಾಗಿರುವುದರಿಂದ ಮತ್ತು ಪ್ರಸಾರದ ಗುಣಮಟ್ಟ ಹಿಂದಿನದಕ್ಕಿಂತ ಕಡಿಮೆಯಾಗಿರುವುದರಿಂದ ಗ್ರಾಹಕರಿಗೆ ಅಸಮಾಧಾನ ಉಂಟಾಗಿದೆ. ಬಹುತೇಕ ಸಂದರ್ಭಗಳಲ್ಲಿ, ಗ್ರಾಹಕರು ನಿರಾಕರಿಸಿದರೂ ಕೂಡ, ಆಪರೇಟರ್ಗಳು ಒತ್ತಾಯಪೂರ್ವಕವಾಗಿ ಹೊಸ ಸೆಟ್ಟಾಪ್ ಬಾಕ್ಸ್ಗಳನ್ನು ಅಳವಡಿಸುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಗ್ರಾಹಕರು ಮೂರು ತಿಂಗಳ ಉಚಿತ ಮಾಸಿಕ ಚಂದಾದಾರಿ ಸೌಲಭ್ಯವನ್ನು ನೀಡುವಂತೆ ಕೇಳಿದಾಗ, ಅನೇಕ ಆಪರೇಟರ್ಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖೆಯು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ.