August 6, 2025
n6709586721751513757358064fa29dfacb398fb9654a06d91d38e55500c4ebebcfb5e39d47b879a5e3ccb0

ಉಡುಪಿ ಸೇರಿದಂತೆ ದೇಶದ ಹಲವು ನಗರಗಳ ಮೂಲಕ 10 ಕ್ಕೂ ಹೆಚ್ಚು ದೇಶಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ಡ್ರಗ್ಸ್ ಜಾಲವನ್ನು ಮಾದಕ ವಸ್ತು ನಿಗ್ರಹ ದಳ ಪತ್ತೆಹಚ್ಚಿದೆ. ಈ ಸಂಬಂಧ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಉಡುಪಿಯಲ್ಲಿಯೇ ಕಾಲ್ ಸೆಂಟರ್ ಸ್ಥಾಪಿಸಿ, ಅದನ್ನು ಡ್ರಗ್ಸ್ ವ್ಯವಹಾರದ ಕೇಂದ್ರವಾಗಿ ಬಳಸುತ್ತಿದ್ದಾರೆಂದು ತಿಳಿದುಬಂದಿದೆ. ಈ ಗ್ಯಾಂಗ್‌ ಕಾರ್ಯಾಚರಣೆ ಉಡುಪಿ ಸೇರಿದಂತೆ ದೆಹಲಿ, ಜೈಪುರ ಹಾಗೂ ರೂರ್ಕಿ ಮುಂತಾದ ದೇಶದ ನಾಲ್ಕು ನಗರಗಳಲ್ಲಿ ನಡೆಯುತ್ತಿತ್ತು.

ಈ ಪಟ್ಟಣಗಳಲ್ಲಿ 8 ಮಂದಿಯನ್ನು ಬಂಧಿಸಿದ್ದು, ಉಡುಪಿಯಲ್ಲಿನ ಕಾಲ್ ಸೆಂಟರ್‌ನಲ್ಲಿ 10 ಜನರನ್ನು ನೇಮಿಸಿ, ಡ್ರಗ್ಸ್ ಆರ್ಡರ್‌ಗಳನ್ನು ಪಡೆಯುವುದು ಸೇರಿದಂತೆ ವಿವಿಧ ವ್ಯವಹಾರಗಳನ್ನು ಈ ಗ್ಯಾಂಗ್ ನಡೆಸುತ್ತಿತ್ತು.

error: Content is protected !!