
ಬೆಂಗಳೂರಿನಲ್ಲಿ ಅಚ್ಚರಿಯ ಘಟನೆ ನಡೆದಿದೆ. ಬಿಹಾರ ಮೂಲದ ಮೂವರು ಆರೋಪಿಗಳು ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿ ನಕಲಿ ಚಿನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮನೆಗೆ ಪಾಯ ಹಾಕುವಾಗ ಚಿನ್ನದ ನಿಧಿ ಸಿಕ್ಕಿದೆ ಎಂದು ನಂಬಿಸುಮುಟ್ಟಿಸಿ, ನಿಜವಾದ ಚಿನ್ನದ ಬೆಲೆಗೆ ಹೋಲಿಸಿದರೆ ಅರ್ಧ ದರಕ್ಕೆ ನೀಡುವುದಾಗಿ ಹೇಳಿ, ಅವರು ಮರದ ಹಲಗೆ ಮತ್ತು ಇಟ್ಟಿಗೆಗಳಿಗೆ ಚಿನ್ನದ ಪಾಲಿಶ್ ಮಾಡುತ್ತಿದ್ದರು.
ಮಾಹಿತಿಯ ಮೇರೆಗೆ, ಆರೋಪಿಗಳು ಚಿನ್ನ ತೆಗೆದುಕೊಳ್ಳುವಂತೆ ಹೇಳಿ ಪದೇಪದೇ ಸ್ಥಳ ಬದಲಿಸುತ್ತಿದ್ದರು. ಕೊನೆಗೆ, ಪೊಲೀಸರು ಕೋರಮಂಗಲದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರು ರಬಿಕುಲ್ ಇಸ್ಲಾಂ, ಇಧೀಶ್ ಅಲಿ ಮತ್ತು ಅನ್ವರ್ ಹುಸೇನ್ ಎಂಬವರಾಗಿದ್ದು, ಸದ್ಯ ಪೊಲೀಸರು ಅವರ ವಿರುದ್ಧ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.