August 3, 2025
n65886373817444275030323850ce4362b032e859c7eb9401e704dcf8a82079fd16bc9fea0a5b8668255942-800x450

2025ರ ಏಪ್ರಿಲ್ 12: ಗುಲಾಬಿ ಚಂದ್ರ (ಪಿಂಕ್ ಮೂನ್) ನೋಡಲು ಮುಂಚಿತವಾಗಿ ತಯಾರಾಗಿ!

ಈ ವರ್ಷ ಏಪ್ರಿಲ್ 12ರಂದು ನಾವು ವಿಶೇಷವಾದ ಹುಣ್ಣಿಮೆಯ ದೃಶ್ಯವನ್ನು ನೋಡಲು ಸಾಧ್ಯವಾಗಲಿದೆ — ಅದೇ ಪಿಂಕ್ ಮೂನ್, ಅಂದರೆ ಗುಲಾಬಿ ಚಂದ್ರ! ದೂರದರ್ಶಕವಿಲ್ಲದೇ ನೇರವಾಗಿ ನಿಮ್ಮ ಮನೆ, ಬಾಲ್ಕನಿ ಅಥವಾ ಛಾವಣಿಯಿಂದಲೇ ಈ ಅಪೂರ್ವ ಕ್ಷಣವನ್ನು ಆನಂದಿಸಬಹುದು. ಆದರೆ ಈ ಚಂದ್ರನು “ಗುಲಾಬಿ” ಎಂಬ ಹೆಸರನ್ನು ಏಕೆ ತಂದುಕೊಳ್ಳುತ್ತಾನೆ? ಇಗೋ ವಿವರ.

ಚಂದ್ರನು ಭೂಮಿಯ ಏಕೈಕ ಉಪಗ್ರಹ. ಅದರ ಚಲನೆ ಹಾಗೂ ಭೂಮಿಯ ತಿರುಗುವಿಕೆಯಿಂದ ಭೂಮಿಯ ಮೇಲೆ ಸಾಕಷ್ಟು ಶಕ್ತಿ ಮತ್ತು ಪರಿಣಾಮ ಬೀರುತ್ತದೆ. ಚಂದ್ರನ ಚಲನೆಯ ಪ್ರಭಾವದಿಂದಲೇ ಹಲವಾರು ಪ್ರಕೃತಿ ಘಟನೆಗಳು ನಡೆಯುತ್ತವೆ.

ಈ ವರ್ಷ ಏಪ್ರಿಲ್ 12ರ ರಾತ್ರಿ, ಸಾದ್ಯವಾಗುವಂತೆ 8:22ರ ವೇಳೆಗೆ ಪಿಂಕ್ ಮೂನ್ ತೋರಿಸಿಕೊಳ್ಳುತ್ತದೆ. ಈ ಹುಣ್ಣಿಮೆಯ ಸಮಯದಲ್ಲಿ ಚಂದ್ರನು ಭೂಮಿಯಿಂದ ಅತಿ ದೂರದಲ್ಲಿರುತ್ತಾನೆ. ಆ ಕಾರಣದಿಂದಾಗಿ ಇದನ್ನು ಮೈಕ್ರೋ ಮೂನ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಸೂಪರ್‌ಮೂನ್‌ಗಿಂತ ಚಿಕ್ಕದಾಗಿಯೂ ಹಾಗು ಕಡಿಮೆ ಪ್ರಕಾಶಮಾನವಾಗಿಯೂ ಕಾಣಿಸಬಹುದು.

ಇದರ ಹೆಸರು “ಪಿಂಕ್ ಮೂನ್” ಎಂದರೂ ಸಹ, ಚಂದ್ರನು ನಿಜವಾಗಿಯೂ ಗುಲಾಬಿ ಬಣ್ಣದಲ್ಲಿ ಕಾಣಿಸುವುದಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಬೇಕು. ಇದು ಮಾತ್ರ ಭ್ರಮೆ. ಚಂದ್ರನ ಗಾತ್ರ ಮತ್ತು ದೂರದ ಕಾರಣದಿಂದಾಗಿ ಚಂದ್ರನು ಸ್ವಲ್ಪ ಮಬ್ಬಾದ, ಹಗುರವಾದ ಬಣ್ಣದಲ್ಲಿ ಕಾಣಿಸಬಹುದು. ಇದು ಕೆಲವರಿಗೆ ಪಿಂಕ್ ಬಣ್ಣದ ಭಾಸ ನೀಡಬಹುದು.

‘ಪಿಂಕ್ ಮೂನ್’ ಎಂಬ ಹೆಸರು ಬರೋದು ಹೇಗೆ?
ಒಲ್ಡ್ ಫಾರ್ಮರ್ಸ್ ಅಲ್ಮಾನಾಕ್ ಪ್ರಕಾರ, ಈ ಚಂದ್ರನಿಗೆ ‘ಪಿಂಕ್’ ಎಂಬ ಹೆಸರು ಬರುವೇಕಾದರೆ, ಅದರ ಹಿಂದೆ ಅರ್ಥವಿದೆ. ಈ ಸಮಯದಲ್ಲಿ ಉತ್ತರ ಅಮೆರಿಕಾದಲ್ಲಿ ವಸಂತ ಋತುವಿನಲ್ಲಿ ಅರಳುವ ಗುಲಾಬಿ ಹೂವುಗಳ ಕಾಲ ಶುರುವಾಗುತ್ತದೆ. ಆ ಹೂವಿನ ಸ್ಮರಣೆಗೆ ಈ ಹುಣ್ಣಿಮೆಗೆ ‘ಪಿಂಕ್ ಮೂನ್’ ಎಂದು ಹೆಸರು ನೀಡಲಾಗಿದೆ. ಇನ್ನು ಬೇರೆ ಕಾರಣವಿಲ್ಲ.

ಈ ಅಪೂರ್ವ ನೋಟವನ್ನು ಏಪ್ರಿಲ್ 12 ಹಾಗೂ 13ರ ರಾತ್ರಿ ವೀಕ್ಷಿಸಬಹುದು. ಆದರೆ ಚಂದ್ರನು ತನ್ನ ಪರಿಪೂರ್ಣ ಸ್ಥಿತಿಗೆ ತಲುಪುವುದು ಏಪ್ರಿಲ್ 12ರ ರಾತ್ರಿ 8:22ಕ್ಕೆ. ಈ ಹೊತ್ತಿಗೆ ಚಂದ್ರನು ಭೂಮಿಯಿಂದ ಬಹಳ ದೂರದಲ್ಲಿರುವುದು ಕಾರಣದಿಂದಾಗಿ ವಿಶೇಷ ದೃಶ್ಯವೊಂದು ಸಿಗಲಿದೆ.

ಇದರ ಇನ್ನೊಂದು ಕುತೂಹಲಕಾರಿ ವಿಷಯ ಎಂದರೆ, ಈ ಪಿಂಕ್ ಮೂನ್‌ಗೂ ಹಲವಾರು ಬೇರೆ ಹೆಸರುಗಳಿವೆ:
– ಬ್ರೇಕಿಂಗ್ ಐಸ್ ಮೂನ್
– ಎಗ್ ಮೂನ್ (ಹೆಬ್ಬಾತುಗಳು ಮೊಟ್ಟೆ ಇಡುವ ಕಾಲ)
– ಡಕ್ ಮೂನ್ (ಬಾತುಕೋಳಿಗಳ ಹಿಂತಿರುಗುವ ಸಮಯ)
– ಫ್ರೋಗ ಮೂನ್ (ಕಪ್ಪೆಗಳ ಚಟುವಟಿಕೆ ಆರಂಭವಾಗುವ ಸಮಯ)

error: Content is protected !!