August 6, 2025
Screenshot_20250704_1020002-640x577

ನನ್ನಂತಾಗುವವರು ಕಡಿಮೆಯಾಗಲಿ: ಸೆಲ್ಫಿ ವಿಡಿಯೋ ಮಾಡಿಸಿಕೊಂಡು 25ರ ಯುವಕ ಆತ್ಮಹತ್ಯೆ

ದಾವಣಗೆರೆ: ಆನ್‌ಲೈನ್ ಗೇಮ್‌ನಲ್ಲಿ ಬರೋಬ್ಬರಿ 18 ಲಕ್ಷ ರೂಪಾಯಿ ಕಳೆದುಕೊಂಡು ಬೇಸರಗೊಂಡ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸರಸ್ವತಿ ನಗರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಶಶಿಕುಮಾರ್ (25) ಎಂದು ಗುರುತಿಸಲಾಗಿದೆ. ಆನ್‌ಲೈನ್ ಗೇಮ್‌ನಲ್ಲಿ ನಷ್ಟ ಅನುಭವಿಸಿದ ಬಳಿಕ ಶಶಿಕುಮಾರ್ ಪ್ರಧಾನಿ, ಮುಖ್ಯಮಂತ್ರಿ, ಸಂಸದೆ, ಡಿಸಿ, ಎಸ್‌ಪಿ ಸೇರಿದಂತೆ ಉನ್ನತಾಧಿಕಾರಿಗಳಿಗೆ ಈ ಗೇಮ್‌ಗಳನ್ನು ನಿಷೇಧಿಸಲು ಮನವಿ ಮಾಡಿದ್ದ. ಆದರೆ ಯಾವುದೇ ಕ್ರಮ ಜರುಗದ ಹಿನ್ನೆಲೆ ಆತ ಸೆಲ್ಫಿ ವಿಡಿಯೋ ಮಾಡಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾನೆ.

ಅತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟಿನಲ್ಲಿ ಆನ್‌ಲೈನ್ ಗೇಮ್‌ಗಳ ಅಕ್ರಮದ ಬಗ್ಗೆ ವಿವರಿಸಿರುವ ಶಶಿಕುಮಾರ್, ‘ನನ್ನಂತಾಗುವವರು ಕಡಿಮೆಯಾಗಲಿ, ಇತರರು ನನ್ನ ತಪ್ಪನ್ನು ಪುನರಾವೃತ್ತಿ ಮಾಡಬಾರದು’ ಎಂದು ಮನವಿ ಮಾಡಿಕೊಂಡಿದ್ದಾನೆ.

ಈ ಘಟನೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!