August 6, 2025
Apr 20, 2025, 09_50_48 AM

ಅಬುಧಾಬಿ: ಬಹುತೇಕ ಭಾರತೀಯರಿಗೆ ಮನೆಯ ಹಿಂಬದಿಯ ಬಾಲ್ಕನಿಯನ್ನು ಬಟ್ಟೆ ಒಣಗಿಸಲು ಅಥವಾ ಬೇಡದ ವಸ್ತುಗಳನ್ನು ಇಡಲು ಬಳಸುವುದು ಸಾಮಾನ್ಯ. ಹಳ್ಳಿಗಳಲ್ಲಿ ಈ ರೀತಿಯ ಬಳಕೆ ಸಾಮಾನ್ಯವಾಗಿದ್ದರೂ, ನಗರಗಳಲ್ಲಿ ಜಾಗದ ಮೌಲ್ಯ ಹೆಚ್ಚಿರುವುದರಿಂದ ಪ್ರತಿಯೊಂದು ಚದರ ಅಡಿ ಜಾಗಕ್ಕೂ ವಿಶೇಷ ಮಹತ್ವ ಇದೆ. ಆದ್ದರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಈ ರೀತಿ ಸ್ಥಳವನ್ನು ಬಳಸುವುದು ಶಿಸ್ತುಹೀನ ಎನಿಸಬಹುದು.

ಅಬುಧಾಬಿಯಂತಹ ಗಲ್ಫ್‌ ನಗರಗಳು ಈಗ ನಗರ ಸೌಂದರ್ಯ ಮತ್ತು ಪರಿಸರ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ಇತ್ತೀಚೆಗೆ ಅಬುಧಾಬಿ ಸಿಟಿ ಮ್ಯುನಿಸಿಪಾಲಿಟಿ, ಗಗನಚುಂಬಿ ಕಟ್ಟಡಗಳ ಬಾಲ್ಕನಿಗಳಲ್ಲಿ ಬಟ್ಟೆ ಒಣಗಿಸುವುದು ಅಥವಾ ಬೇಡದ ವಸ್ತುಗಳನ್ನು ಸಂಗ್ರಹಿಸುವಂತಹ ಅನಿಯಮಿತ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಈ ಹೊಸ ನಿಯಮಗಳ ಪ್ರಕಾರ, ಬಾಲ್ಕನಿಯಲ್ಲಿ ಬಟ್ಟೆ ತೂಗು ಹಾಕುವುದು ಅಥವಾ ಕಸದ ರೀತಿಯ ವಸ್ತುಗಳನ್ನು ಇಡುವುದು ಕಂಡುಬಂದರೆ ಪ್ರಾಥಮಿಕವಾಗಿ 500 ದಿರ್ಹಮ್ (ಭಾರತೀಯ ಮೌಲ್ಯದಲ್ಲಿ ಸుమಾರು ₹11,627) ದಂಡ ವಿಧಿಸಲಾಗುತ್ತದೆ. ಇದೇ ತಪ್ಪು ಮತ್ತೆಮತ್ತೆ ಪುನರಾವೃತ್ತಿಯಾದರೆ, ದಂಡದ ಮೊತ್ತ 2000 ದಿರ್ಹಮ್ (ಸುಮಾರು ₹46,509) ವರೆಗೆ ಏರಬಹುದು.

ಈ ಕ್ರಮದ ಉದ್ದೇಶವೆಂದರೆ ಅಬುಧಾಬಿಯಲ್ಲಿ ಶುದ್ಧ, ಸುಂದರ ಹಾಗೂ ಸುಸ್ಥಿರ ನಗರ ಪರಿಸರವನ್ನು ಕಾಪಾಡುವುದು. ಆದರೆ, ಗಲ್ಫ್ ರಾಷ್ಟ್ರಗಳಲ್ಲಿ ಕೆಲಸಕ್ಕಾಗಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರು, ಭಾರತದಲ್ಲಿನ ಹಳೆಯ ಅಭ್ಯಾಸದ ಪ್ರಕಾರ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸಲು ಮುಂದಾದರೆ, ಈ ನಿಯಮದ ಪರಿಣಾಮವಾಗಿ ಅವರಿಗೆ ಭಾರೀ ಹಣಪೆನಾಲ್ಟಿ ವಿಧವಾಗುವ ಸಾಧ್ಯತೆ ಇದೆ.

error: Content is protected !!