
ಕೋಟ: ಅಂದರ್ ಬಾಹರ್ ಜುಗಾರಿ ಆಟದ ಅಡಡೆಗೆ ಪೊಲೀಸರು ದಾಳಿ – 7 ಮಂದಿ ಬಂಧನ
ಉಡುಪಿ ಜಿಲ್ಲೆ ಕೋಟ ಸಮೀಪದ ಬ್ರಹ್ಮಾವರ ತಾಲೂಕಿನ ಮೆತ್ತಗೊಳಿ ಎಂಬಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ ನಡೆಸಿದ್ದಾರೆ.
2025ರ ಜುಲೈ 13ರಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಘವೇಂದ್ರ ಸಿ ಅವರಿಗೆ ನಿಲೇಶ್ ಎಂಬುವರ ಕೋಳಿ ಶೆಡ್ ಬಳಿ ಇಸ್ಪೀಟು ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಕ್ಷಣ ದಾಳಿ ನಡೆಸಲಾಯಿತು. ದಾಳಿಯ ವೇಳೆ ಕೆಲವರು ಓಡಿಹೋದರೂ, ಆಟದಲ್ಲಿ ತೊಡಗಿದ್ದ ಈ ಕೆಳಗಿನ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ:
- ಜಯಕರ
- ಚಕ್ರಪಾಣಿ
- ನಿಲೇಶ್
- ಜಗದೀಶ
- ಗೋಪಾಲ
- ಸದಾಶಿವ
- ಕಾಳಪ್ಪ
ಪೊಲೀಸರು ಜುಗಾರಿ ಆಟಕ್ಕೆ ಬಳಸಲಾಗಿದ್ದ ₹9,880 ನಗದು, 8 ಮೊಬೈಲ್ ಫೋನ್‌ಗಳು, ಒಂದು ಕಾರು, ಮೂರು ಸ್ಕೂಟರ್‌ಗಳು, ಒಂದು ರೌಂಡ್ ಟೇಬಲ್, 8 ಪ್ಲಾಸ್ಟಿಕ್ ಕುರ್ಚಿಗಳು, ಒಂದು ಬೆಡ್ ಶೀಟ್ ಹಾಗೂ ಇಸ್ಪೀಟು ಎಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025ರಂತೆ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 87 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.