August 5, 2025
Screenshot_20250714_1821162-640x357

ಸುರತ್ಕಲ್: ಟ್ಯಾಂಕರ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅಪಘಾತ ತಪ್ಪಿದ ದೃಶ್ಯ

ಸುರತ್ಕಲ್ ಸಮೀಪದ ಕುಳಾಯಿ ರೈಲ್ವೆ ಸೇತುವೆ ಬಳಿ ಭಾನುವಾರ (ಜುಲೈ 13) ಮಧ್ಯಾಹ್ನ ಟ್ಯಾಂಕರ್‌ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.

ಎಲ್‌ಪಿಜಿ ಅನಿಲ ತುಂಬಿಸಲು ಎಚ್‌ಪಿಸಿಎಲ್‌ ಕಡೆಗೆ ತೆರಳುತ್ತಿದ್ದ ಟ್ಯಾಂಕರ್‌ನ ಚಾಲಕರೊಬ್ಬರು ದಿಢೀರ್‌ ರಕ್ತ ವಾಂತಿ ಮಾಡಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಶಾರೀರಿಕ ಸ್ಥಿತಿ ಕುಗ್ಗಿದರೂ ಕೂಡ ಅವರು ತಕ್ಷಣವೇ ಹ್ಯಾಂಡ್ ಬ್ರೇಕ್ ಉಪಯೋಗಿಸಿ ವಾಹನವನ್ನು ನಿಯಂತ್ರಿತವಾಗಿ ನಿಲ್ಲಿಸಿದ್ದರು.

ಚಾಲಕ ಪ್ರಜ್ಞೆ ಕಳೆದುಕೊಂಡ ಬಳಿಕ ಸ್ಥಳೀಯರು ಆಂಬುಲೆನ್ಸ್ ಮೂಲಕ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸೂಕ್ಷ್ಮ ಲಾರಿಯಲ್ಲಿ ಅಸ್ವಸ್ಥತೆ ಎದುರಿಸಿದಾಗ ಕೂಡ ಸಮಯ ಸಚ್ಚಿಂತನೆಯೊಂದಿಗೆ ಕ್ರಮ ಕೈಗೊಂಡ ಚಾಲಕ ಭಾರೀ ಅಪಾಯವನ್ನು ತಪ್ಪಿಸಿದ್ದು, ಜನರಿಂದ ಪ್ರಶಂಸೆಗೊಳಗಾಗಿದ್ದಾರೆ.

error: Content is protected !!