
ಕಾರ್ಕಳ: ಪಾರ್ಟ್ ಟೈಂ ಕೆಲಸದ ಹೆಸರು ಹೇಳಿ ಹಿರ್ಗಾಣದ ಯುವತಿ ಲಕ್ಷಾಂತರ ರೂ. ವಂಚನೆಗೆ ಒಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹಿರ್ಗಾಣದ ಕೀರ್ತನಾ ಅವರಿಗೆ ಜೂನ್ 27 ರಂದು ಟೆಲಿಗ್ರಾಂ ಖಾತೆಯಿಂದ ‘@Nithya_reception_nist_NSE99’ ಲಿಂಕ್ ಬಂದಿತ್ತು. ಲಿಂಕ್ ಓಪನ್ ಮಾಡಿದಾಗ ಪಾರ್ಟ್ ಟೈಂ ಕೆಲಸದ ಆಫರ್ ಕಾಣಿಸಿಕೊಂಡಿದ್ದು, ಪ್ರಾರಂಭಿಕ ಟಾಸ್ಕ್ಗಾಗಿ 1000 ರೂ. ವರ್ಗಾವಣೆ ಮಾಡುವಂತೆ ಸೂಚಿಸಲಾಗಿತ್ತು. ಕೀರ್ತನಾ ಅವರು ಹಣ ವರ್ಗಾವಣೆ ಮಾಡಿದಾಗ, ಲಾಭಾಂಶವಾಗಿ 3000 ರೂ. ಅವರಿಗೆ ಕಳುಹಿಸಲಾಗಿತ್ತು.
ಇದರಿಂದ ವಿಶ್ವಾಸಕ್ಕೆ ಬಿದ್ದ ಕೀರ್ತನಾ ಅವರನ್ನು ಮತ್ತಷ್ಟು ಹಣ ಹಾಕುವಂತೆ ಪ್ರೇರೇಪಿಸಿ, ಜೂನ್ 27 ರಂದು 70,000 ರೂ. ಹಾಗೂ ಜೂನ್ 28 ರಂದು 75,000 ರೂ. ಸೇರಿ ಒಟ್ಟು 1,45,000 ರೂ. Nithya Ponnumani ಎಂಬ ಖಾತೆಗೆ Scanr ಅಪ್ಲಿಕೇಶನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಆದರೆ ಬಳಿಕ ಲಾಭಾಂಶವನ್ನೂ ಅಲ್ಲದೇ ಮರುಪಾವತಿಯನ್ನು ಕೂಡ ನೀಡದೇ ವಂಚನೆ ಎಸಗಲಾಗಿದೆ ಎಂದು ಕೀರ್ತನಾ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.